top of page

 ದಿನಾಂಕ 05-03-24 ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಜಿಲ್ಲಾಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ 10 ವಿದ್ಯಾರ್ಥಿಗಳು  ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ. ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯರು ಜಾನಪದ ನೃತ್ಯ ವಿಭಾಗದಲ್ಲಿ ಸುಗ್ಗಿ ಕುಣಿತ ಪ್ರದರ್ಶಿಸುತ್ತಾರೆ. 

              

ನಮ್ಮ ವಿದ್ಯಾರ್ಥಿಗಳ ಸಾಧನೆ                               


ಚಿತ್ರಕಲಾ ಸ್ಪರ್ಧೆ_ ಶೃತಿ R N,  ದ್ವಿತೀಯ ಸ್ಥಾನ 

ಸ್ವರಚಿತ ಕವನ ವಾಚನ ಸ್ಪರ್ಧೆ_ ಸ್ನೇಹ U, ತೃತೀಯ ಸ್ಥಾನ 

ಜನಪದಗೀತೆ _ ಪ್ರೇಕ್ಷ P, ತೃತೀಯ 

ಜನಪದಗೀತೆ (ಸಮೂಹ)_ ದ್ವಿತೀಯ 
















18 views0 comments

ದಿನಾಂಕ 15-2-2024ರ ಗುರುವಾರ ನಮ್ಮ ಶಾಲೆಯಲ್ಲಿ ‘ಕಾನೂನು ಅರಿವು ನೆರವು’ ಎಂಬ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಶೃಂಗೇರಿ ತಾಲ್ಲೂಕಿನ ಖ್ಯಾತ ವಕೀಲರು ಹಾಗೂ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯೂ  ಆದ ಶ್ರೀ ಪ್ರದೀಪ್. ಕೆ ಇವರು ನಡೆಸಿಕೊಟ್ಟರು.

ಸಂವಾದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ 5 ರಿಂದ 7 ನೇ ತರಗತಿಯ ವಿಧ್ಯಾರ್ಥಿಗಳು  ಹಾಗೂ ಎಲ್ಲ ಶಿಕ್ಷಕರು ಭಾಗವಹಿಸಿದ್ದರು.  ಈ ಕಾರ್ಯಕ್ರಮದ ಉದ್ದೇಶ 7 ನೇ  ತರಗತಿಯ ನ್ಯಾಯಾಂಗ ಪಾಠದಲ್ಲಿ ನೀಡಲಾದ ವಿಷಯಗಳ ಬಗ್ಗೆ  ಹೆಚ್ಚಿನ ಮಾಹಿತಿ ನೀಡುವುದು  ಹಾಗೂ ಮಕ್ಕಳಲ್ಲಿ ಕಾನೂನು ಅರಿವು ಮೊಡಿಸುವುದು.


 ಸಂವಾದದ ಪ್ರಮುಖ ಅಂಶಗಳು.

  1. ಭಾರತದ ನ್ಯಾಯಾಂಗ ವ್ಯವಸ್ಥೆ,

       ಸರ್ವೋಚ್ಚ ನ್ಯಾಯಾಲಯ

      ಉಚ್ಛ ನ್ಯಾಯಾಲಯ

      ಅಧೀನ ನ್ಯಾಯಾಲಯ

       ಲೋಕ್ ಅದಾಲತ್

 ಸರ್ಕಾರದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ     ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಹೇಳಿದರು.

  1. ನ್ಯಾಯಾಂಗದ ಇತಿಹಾಸ: ಸ್ವಾತಂತ್ರಕ್ಕಿಂತ ಮೊದಲು ನಮ್ಮ ದೇಶದಲ್ಲಿ ರಾಜರ ಆಳ್ವಿಕೆ ಇತ್ತು. ರಾಜನೇ  ರಾಜ್ಯದಲ್ಲಿ ನಡೆಯುವ ಎಲ್ಲ ಪ್ರಕರಣಗಳಿಗೆ  ನ್ಯಾಯವನ್ನು ನೀಡುತ್ತಿದ್ದನು. ಆಗಿನ ಕಾನೂನಿನ ಶಿಕ್ಷೆಗಳು ಬಹಳ ಕ್ರೂರವಾಗಿರುತ್ತಿದ್ದವು. ಯಾವಾಗ ಬ್ರಿಟಿಷ್ ಆಳ್ವಿಕೆ ಭಾರತದಲ್ಲಿ ಪ್ರಾರಂಭವಾಯಿತೋ, ಆಗ   ಅವರು ತಮ್ಮದೇ ಆದ ಕಾನೂನುಗಳನ್ನು ಜಾರಿಗೆ ತಂದು, ಅದನ್ನು ಲಿಖಿತ ರೂಪದಲ್ಲಿ ಬರೆದಿಡುತ್ತ ಬಂದರು. ಆ ಕಾನೂನುಗಳೇ ಪ್ರಸ್ತುತವಾಗಿ ಚಾಲ್ತಿಯಲ್ಲಿದೆ ಎಂದು ಮಕ್ಕಳಿಗೆ ತಿಳಿಸಿದರು.

  2. ನ್ಯಾಯಾಂಗ

1 ದೇಶದಲ್ಲಿ-ಸುಪ್ರೀಮ್ ಕೋರ್ಟ್,

2.ರಾಜ್ಯಗಳಲ್ಲಿ-ಹೈಕೋರ್ಟ್

3.ಜಿಲ್ಲೆಗಳಲ್ಲಿ -ಜಿಲ್ಲಾ ನ್ಯಾಯಾಲಯಗಳು, 

4.ತಾಲೂಕುಗಳಲ್ಲಿ-ಅಧೀನ ನ್ಯಾಯಾಲಯ ಹಾಗೂ  ಇದಲ್ಲದೆ

 ಲೋಕ್ ಅದಾಲತ್ ಗಳು ಕಾರ್ಯ ನಿರ್ವಹಿಸುತ್ತದೆ ಎಂದರು.


  1.  ನ್ಯಾಯವಾದಿ ಅಥವಾ ನ್ಯಾಯಾಧೀಶರಾಗಲು  ಕಾನೂನು ಪದವಿಯನ್ನು ಓದಿರಲೇಬೇಕು. ಪದವಿ ಪೂರ್ವ ಶಿಕ್ಷಣದ  ನಂತರ 5 ವರ್ಷಗಳು ಕಾನೂನು ಪದವಿಯನ್ನು ಓದಬೇಕು. ಇಲ್ಲವಾದರೆ ಡಿಗ್ರಿ ಮುಗಿದ ಮೇಲೆ  3 ವರ್ಷಗಳು  L.L.B ಯನ್ನು ಓದಬೇಕಾಗುತ್ತದೆ. ಕಾನೂನು ಪದವಿಯ ನಂತರ All India Bar council ಪರೀಕ್ಷೆಯನ್ನು ಪಾಸು ಮಾಡಬೇಕು. ನಂತರ  ಕೋರ್ಟ್ ನಲ್ಲಿ ವಕಾಲತ್ತು ಮಾಡಬಹುದು.

  2. ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ:

ಹಣ, ಆಸ್ತಿ ವ್ಯವಹಾರಕ್ಕೆ ಸಂಬಂದ ಪಟ್ಟ  ವಿಚಾರಗಳಿಗೆ ವಿವಾದ ನಡೆಯುವುದು ಸಿವಿಲ್ ಪ್ರಕರಣ.  ಹಾಗೆ  ಇದು   ಇತ್ಯರ್ಥ ವಾಗಲು ಅತಿ ಹೆಚ್ಚು ಸಮಯ ಬೇಕು ಎಂದರು.

 *ಕ್ರಿಮಿನಲ್ ಪ್ರಕರಣಗಳು -ಕೊಲೆ, ಕಳ್ಳತನ ದರೋಡೆ ಇಂತಹ ವಿಚಾರಗಳಿಗೆ ವಿವಾದ ನಡೆಯುತ್ತದೆ. ಈ  ವಿವಾದಗಳು ಇತ್ಯರ್ಥವಾಗಲು ಕಡಿಮೆ ಸಮಯ ಸಾಕಾಗುತ್ತದೆ ಎಂದರು. 

 *ಅಧೀನ ನ್ಯಾಯಾಲಯದಲ್ಲಿ ಪ್ರಕರಣಗಳು ಬಗೆ ಹರಿಯದಿದ್ದರೆ ಸರ್ವೋಚ್ಚ ನ್ಯಾಯಲಯದವರೆಗೂ ಅಪೀಲನ್ನು ಮಾಡಿ ತೀರ್ಪನ್ನು ಪಡೆಯಬಹುದು.

  1. ಭಾರತದಲ್ಲಿ ಏಕರೂಪವಾದ ಕಾನೂನುಗಳು ಇಲ್ಲ. ಧರ್ಮಕ್ಕನುಗುಣವಾಗಿ ಕಾನೂನುಗಳಿವೆ ಇವೆಲ್ಲ ಬ್ರಿಟಿಷ್ ಸರ್ಕಾರವಿದ್ದಾಗಲೇ ರೂಪುಗೊಂಡಿವೆ ಎಂದರು.

  2. ನ್ಯಾಯಾಧೀಶರು:

ಕೆಳಮಟ್ಟದ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವ ನ್ಯಾಯವಾದಿಗಳು ನ್ಯಾಯಾದೀಶರಾಗಲು ಇಚ್ಛಿಸಿದರೆ ಅವರು ಪರೀಕ್ಷೆಯನ್ನು ಬರೆಯಬೇಕು ಹಾಗೆ ಮೌಖಿಕ ಪರೀಕ್ಷೆ ಯನ್ನು ಪಾಸು ಮಾಡಬೇಕಾಗುತ್ತದೆ.

  1. ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ :

 ಪ್ರಾರಂಭವಾದ ವರ್ಷ, ನ್ಯಾಯಾಧೀಶರು ಯಾರು? ಎಷ್ಟು ಹೈಕೋರ್ಟ್ ಗಳಿವೆ  ಅಧಿಕಾರ ಅವಧಿ ಎಷ್ಟು? ಮತ್ತು ಬೆಂಚಸ್ ಎಂದರೇನು? ಎಂದು ಮಕ್ಕಳೊಂದಿಗೆ ಚರ್ಚಿಸಿದರು.

  1. ಲೋಕ್ ಅದಾಲತ್:

ಜನರ ಅದಾಲತ್ ಎಂದೇ ಹೆಸರಾಗಿದೆ ಇದರಲ್ಲಿ ಪ್ರಕರಣಗಳನ್ನು ರಾಜಿ ಮಾಡಿಸುತ್ತಾರೆ ರಾಜಿಯಾದ ಪ್ರಕರಣಗಳು ಮತ್ತೆ ಪ್ರಾರಂಭ ಮಾಡುವುದಿಲ್ಲ ಎಂದರು.

  1. ಮಕ್ಕಳ  ಪ್ರಶ್ನೆಗಳು:

1. ನ್ಯಾಯವಾದಿಗಳಾಗಲು ಏನು ಮಾಡಬೇಕು?

2. ರಿಟ್ ಅರ್ಜಿ ಎಂದರೇನು?

3. ಬಾಲಾಪರಾದ ಎಂದರೇನು? ಅವರಿಗೆ ನೀಡುವ ಶಿಕ್ಷೆಗಳೇನು?

4. ನ್ಯಾಯಾಧೀಶರ ಕರ್ತವ್ಯಗಳೇನು?

5. ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಯಾವುವು?

6. ಜನನ ಮತ್ತು ಮರಣ ಪ್ರಮಾಣ ಪಾತ್ರಗಳ ಮಹತ್ವವೇನು?

7. ಸೈಬರ್ ಪ್ರಕರಣಗಳು ಎಂದರೇನು? ಅವುಗಳನ್ನು ಎಲ್ಲಿ ಬಗೆಹರಿಸುತ್ತಾರೆ?

8. ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಕರ್ತವ್ಯವೇನು.?

 ಎಲ್ಲಾ ಪ್ರಶ್ನೆಗಳಿಗೂ ಮಕ್ಕಳ ಮಟ್ಟಕ್ಕೆ ಅನುಗುಣವಾಗಿ ಸರಳವಾಗಿ  ಸಂವಾದ ನಡೆಸಿದರು.  ಕೇವಲ ಅಂಕಗಳಿಕೆಗೆ ಮಾತ್ರ ಕಲಿಕೆ ಎಂಬುದಿರಬಾರದು, ಅದರಲ್ಲಿ ಮೌಲ್ಯಗಳಿರಬೇಕು  ಎಂದು ಮಕ್ಕಳಿಗೆ ಹೇಳಿದರು.













59 views0 comments

ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ. ಗಂಡಘಟ್ಟ 

ರಾಷ್ಟೀಯ ವಿಜ್ಞಾನ ದಿನ 

ದಿನಾಂಕ 28-02-24 ಬುಧವಾರ 


ರಾಷ್ಟೀಯ ವಿಜ್ಞಾನ  ದಿನದ ಅಂಗವಾಗಿ ದಿನಾಂಕ 28-02-24 ರ ಬುಧವಾರ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದರಿಂದ ಐದನೇ ತರಗತಿಯವರೆಗಿನ ಮಕ್ಕಳಿಗೆ ಚಿತ್ರಕಲೆ, ಎಲೆ ಗುರುತಿಸುವುದು, ರಸಪ್ರಶ್ನೆ ಮುಂತಾದ ಸ್ಪರ್ಧೆಗಳನ್ನು ನಡೆಸಲಾಗಿತ್ತು.


 ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ “ವಿಜ್ಞಾನ ಮತ್ತು ತಂತ್ರಜ್ಞಾನ - ವರ ಅಥವಾ ಶಾಪ “ ಎಂಬ ವಿಷಯವಾಗಿ ಚರ್ಚಾಸ್ಪರ್ಧೆ ಏರ್ಪಡಿಸಲಾಗಿತ್ತು. ವಿಷಯದ ಪರವಾಗಿ ಮಾತನಾಡಿದ ತಂಡವು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗಳು ಜನರ ಬದುಕಿಗೆ ಅನುಕೂಲಕರವಾಗಿದೆ. ವಿದ್ಯುತ್  ಉಪಕರಣಗಳು, ವೈದ್ಯಕೀಯ  ಮತ್ತು ಕೃಷಿ  ಕ್ಷೇತ್ರದಲ್ಲಿ ಆದ ಸಂಶೋಧನೆಗಳು  ಹಾಗೂ ಸಂಪರ್ಕ ಕ್ಷೇತ್ರದಲ್ಲಿ ಆದ  ಪ್ರಗತಿಯು ಜನರ ಜೀವನ ಮಟ್ಟವನ್ನು ಸುಧಾರಿಸಿದೆ ಎಂದು ವಾದಿಸಿದರು. ಇದನ್ನು ಬಲವಾಗಿ ವಿರೋಧಿಸಿದ ತಂಡವು ಜೀವನ ಸುಧಾರಣೆ ಆಗುವ ಬದಲು ಜನರು ಸೋಮಾರಿಗಳಾಗಿದ್ದಾರೆ , ಮೊಬೈಲ್ ಬಳಕೆ ವ್ಯಸನವಾಗಿದೆ, ಅಲ್ಲದೇ  ಇದರ ಪರಿಣಾಮವಾಗಿ ಕಾಡು, ಇತರೆ ಜೀವ ಸಂಕುಲವು ಅಪಾಯದಲ್ಲಿದೆ ಎಂದು ತಮ್ಮ ವಾದವನ್ನು ಮಂಡಿಸಿದರು. ಇದರ ತೀರ್ಪುಗಾರಿಕೆಯನ್ನು ನಡೆಸಿಕೊಟ್ಟ ಶ್ರೀ ಮಂಜುನಾಥ್ ಜಿ. ಎಸ್. ಹಾಗು ಶ್ರೀ  ಆದಿತ್ಯ ಡಿ.ಕೆ. ಇವರು ವಿದ್ಯಾರ್ಥಿಗಳಿಗೆ ಉತ್ತಮವಾದ ಸಲಹೆಗಳನ್ನು ನೀಡಿದರು. 






ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿವೇಚನೆಯಿಂದ ಬಳಸಬೇಕು ಎಂಬುದನ್ನು ವಿವರವಾಗಿ ಶ್ರೀ ಮಂಜುನಾಥ್ ಜಿ. ಎಸ್ . ತಿಳಿಸಿದರು. ಮಕ್ಕಳು  ಚರ್ಚಾಸ್ಪರ್ಧೆಗೆ ಹೇಗೆ ತಯಾರಿ ಮಾಡಬೇಕು, ಇನ್ನು ಉತ್ತಮವಾಗಿ ಹೇಗೆ ವಾದ  ಮಂಡಿಸಬೇಕು ಎಂಬ ವಿಚಾರವನ್ನು ಶ್ರೀ ಆದಿತ್ಯ ಡಿ.ಕೆ. ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಮತಿ ಸುರಭಿ ಅರವಿಂದ ರವರು ಇಂದು ವಿಜ್ಞಾನದ  ಸಂಶೋಧನೆಗಳು ಹಾಗೂ ಪರಿಸರ ಸಂರಕ್ಷಣೆ ಎರಡೂ ಜೊತೆಯಾಗಿ ಸಾಗಬೇಕಿದೆ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ವಿಜಯ ಎಸ್ .ವಿ. , ಬಡ್ತಿ ಮುಖ್ಯ ಶಿಕ್ಷಕರು ಮಾತನಾಡಿ ಉತ್ತಮವಾಗಿ ಚರ್ಚಾಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳನ್ನು ಅಭಿನಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 







ವಿಜ್ಞಾನ ಶಿಕ್ಷಕರಾದ ಶ್ರೀಮತಿ ಚೈತ್ರ ರವರು ವಿಜ್ಞಾನ ದಿನದ ಮಹತ್ವವನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ಅತಿಥಿ ಶಿಕ್ಷಕರಾದ ಶ್ರೀಮತಿ ಚಿತ್ರ ಸಿ.ಕೆ. ರವರು ಚರ್ಚಾಸ್ಪರ್ಧೆಯನ್ನು ನಡೆಸಿಕೊಟ್ಟರು. ಶಿಕ್ಷಕರಾದ ಶ್ರೀಮತಿ ಲತಾ ಜಿ. ಭೀಮಪ್ಪನವರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪ್ರಣೀತ ಎಚ್ . ಆರ್ . ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜೆ.ಸಿ ಮಹೇಶ್ ರವರು ಎಲ್ಲರನ್ನು ವಂದಿಸಿದರು. ಅತಿಥಿ ಶಿಕ್ಷಕರಾದ ಶ್ರೀಮತಿ ಶಿಲ್ಪ ರವರು ಬಹುಮಾನ ವಿತರಣೆ ನಡೆಸಿಕೊಟ್ಟರು.



********************************************


181 views1 comment
bottom of page